ಉತ್ತರ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಶ್ರೀ ಬಾಲಾಜಿ ಆಸ್ಪತ್ರೆ ವೈದ್ಯರು ರೋಗಿಗೆ ಸೊಂಟದ ಜಾಗದಲ್ಲಿ ಸ್ಟೆಮ್ ಸೆಲ್ಸ್ ಥೆರಪಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಸಾಧನೆ ಮಾಡಿದ್ದಾರೆ.
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ ಶ್ರೀ ಬಾಲಾಜಿ ಆಸ್ಪತ್ರೆ ವೈದ್ಯರು ರೋಗಿಗೆ ಸೊಂಟದ ಜಾಗದಲ್ಲಿ ಸ್ಟೆಮ್ ಸೆಲ್ಸ್ ಥೆರಪಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಸಾಧನೆ ಮಾಡಿದ್ದಾರೆ ಎಂದು ಬಾಲಾಜಿ ಆಸ್ಪತ್ರೆ ಚೇರ್ಮನ್ ಹಾಗೂ ನರರೋಗ ತಜ್ಞ ಡಾ. ಕ್ರಾಂತಿಕಿರಣ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಆಸ್ಪತ್ರೆಯ ಎಲುಬು, ಕೀಲು ಶಸ್ತ್ರ ಚಿಕಿತ್ಸಕ ತಜ್ಞ ವೈದ್ಯರಾದ ಡಾ.ಹರಿಕೃಷ್ಣ ಅವರ ನೇತೃತ್ವದಲ್ಲಿ ಸೊಂಟದ ಭಾಗದಲ್ಲಿ ಪೆಟ್ಟು ಬಿದ್ದು ಸರಿಯಾಗಿ ನಡೆದಾಡಲು ಸಾಧ್ಯವಾಗದೇ ನೋವು ಅನುಭವಿಸುತ್ತಿದ್ದ ಗದಗ ಜಿಲ್ಲೆಯ ವಿನೋದ ಬಿಮಲ್ (39) ಎಂಬುವರಿಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಸಹಾಯದೊಂದಿಗೆ ಸೊಂಟದ ಜಾಗದಲ್ಲಿ ಸ್ಟೆಮ್ ಸೆಲ್ಸ್ ಥೆರಪಿ ಶಸ್ತ್ರಚಿಕಿತ್ಸೆ ನಡೆಸಿ, ಸಂಪೂರ್ಣ ಗುಣಪಡಿಸಲಾಗಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲೇ ಪ್ರಥಮ ಎಂದರು.
ಡಾ.ಹರಿಕೃಷ್ಣ ಮಾತನಾಡಿ, ವಿನೋದ ಬಿಮಲ್ ಸೊಂಟದ ನೋವು ತಾಳಲಾರದೇ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೊಂಟದ ಭಾಗದಲ್ಲಿ ಡ್ಯಾಮೇಜ್ ಆಗಿತ್ತು. ನಂತರ ಅವರ ಸೊಂಟದ ಫ್ಲೂವೀಡ್ ಅನ್ನು ತೆಗೆದು ಲ್ಯಾಬಿಗೆ ಕಳುಹಿಸಿ ಅಲ್ಲಿ ಫ್ಲೂವೀಡ್ನಲ್ಲಿರುವ ಸೆಲ್ಸ್ ಅನ್ನು ಬೆಳೆಸಿ ಅದನ್ನು ಮರು ರೋಗಿಗೆ ಇಂಜೆಕ್ಟ್ ಮಾಡಿದ್ದಲ್ಲದೇ, ರೋಗಿಯ ಎಲುಬನ್ನು ಸಂಗ್ರಹಿಸಿ ಅದರಿಂದ ಜಲ್ ಮಾದರಿ ತಯಾರಿಸಿ, ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಡ್ಯಾಮೇಜ್ ಆದ ಸೊಂಟದ ಮೇಲೆ ಲೇಪನ್ ಮಾಡುವ ಮೂಲಕ ಯಶಸ್ವಿ ಸ್ಟೆಮ್ ಸೆಲ್ಸ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ತರಹದ ನೋವಿನಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ಸಂಪರ್ಕಿಸಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದರು.