ಬಾಲಾಜಿ ಆಸ್ಪತ್ರೆಯಲ್ಲಿ ದಾದಿಯರ ದಿನ ಆಚರಣೆ.
ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಬಾಲಾಜಿ ಆಸ್ಪತ್ರೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಮುಖ್ಯಸ್ಥರು ಹಾಗೂ ಹಿರಿಯ ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಕ್ರಾಂತಿಕಿರಣ್, ಸಂಸ್ಥೆಯ ಸಿಇಓ ರಿಕ್ಕಿ ಖೋಡೆ, ವೈದ್ಯರಾದ ಡಾ. ಅಬಿದ್ ಹುಸೇನ್, ಡಾ.ವಿಶ್ವನಾಥ ಕಮತಗಿ, ಹೆಚ್.ಆರ್ ವಿಭಾಗದ ಅಭಯಕುಮಾರ ಹಾಗೂ ನರ್ಸಿಂಗ್ ಸೂಪರಿಂಟೆಂಡೆಂಟ್ ಸೋನಿಯಾ ಬೆಂಗಳೂರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನರ್ಸಿಂಗ್ ಕ್ಷೇತ್ರದ ಕುರಿತು ಮತ್ತು ಫ್ಲಾರೆನ್ಸ್ ನೈಟಿಂಗೇಲ್ ಅವರ ಕುರಿತು ಸಂಸ್ಥೆಯ ಸಿಇಓ ರಿಕ್ಕಿ ಖೋಡೆ ಮಾತನಾಡಿ ಇತಿಹಾಸವನ್ನು ನೆನಪಿಸಿದರು. ಯಾವುದೇ ಒಂದು ವೈದ್ಯಕೀಯ ಸಂಸ್ಥೆಯ ಯಶಸ್ಸಿನ ಪಾಲುದಾರಿಕೆಯಲ್ಲಿ ನರ್ಸಿಂಗ್ ವಿಭಾಗದ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಡಾ. ಕ್ರಾಂತಿಕಿರಣ್ ಅವರು ತಿಳಿಸಿದರು.
ಸಂಸ್ಥೆಯ ಸಿಬ್ಬಂದಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲ ಸಿಬ್ಬಂದಿಗಳಿಗೂ ಕಾರ್ಯಕ್ರಮದ ನಿರೂಪಣೆ ಮಾಡಿದ ಆಫ್ರಿನ್ ಧನ್ಯವಾದ ತಿಳಿಸಿದರು.