ಹುಬ್ಬಳ್ಳಿ: ಉತ್ತಮ ಜೀವನ ಪದ್ಧತಿಯಿಂದ ಪಾರ್ಶ್ವವಾಯು ತಡೆಗಟ್ಟಲು ಸಾಧ್ಯ ಎಂದು ಶ್ರೀ ಬಾಲಾಜಿ ಆಸ್ಪತ್ರೆಯ ಚೇರಮನ್ರು ಆಗಿರುವ ನರರೋಗ ತಜ್ಞ ಡಾ.ಕ್ರಾಂತಿಕಿರಣ ಹೇಳಿದರು.
ವಿಶ್ವ ಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಸೋಮವಾರ ಶ್ರೀ ಬಾಲಾಜಿ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಾರ್ಶ್ವವಾಯು ತಡೆಗಟ್ಟುವಿಕೆ ತಿಳಿವಳಿಕೆ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಾ. ಕ್ರಾಂತಿಕಿರಣ ಉಪನ್ಯಾಸ ನೀಡಿದರು.
ಪಾರ್ಶ್ವವಾಯುಯಿಂದ ಸಾವನ್ನಪ್ಪುವರ ಸಂಖ್ಯೆ ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಡಾ.ಕ್ರಾಂತಿಕಿರಣ, ಉತ್ತಮ ಜೀವನ ಪದ್ಧತಿಯಿಂದ ಪಾರ್ಶ್ವವಾಯು ರೋಗದಿಂದ ಪಾರಾಗಲು ಸಾಧ್ಯ ಎಂದರು.
50 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಪಾರ್ಶ್ವವಾಯು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಯುವ ಜನಾಂಗದಲ್ಲಿಯೂ ಪಾರ್ಶ್ವವಾಯು ರೋಗ ಕಂಡು ಬರುತ್ತಿರುವುದು ನಿಜಕ್ಕೂ ಸದೃಢ ಭಾರತ ಕಲ್ಪನೆಗೆ ಮಾರಕವಾಗಿ ಪರಿಣಮಿಸಿದೆ ಎಂದ ಅವರು, ಇದು ಮಹಿಳೆಯರಗಿಂತಲೂ ಹೆಚ್ಚಾಗಿ ಪುರುಷರಲ್ಲಿ ಹೆಚ್ಚಾಗಿಕಂಡು ಬರುತ್ತಿದೆ ಎಂದರು, ಇದಕ್ಕೆ ಮುಖ್ಯ ಕಾರಣ ಪುರುಷರು ತಂಬಾಕು ಜಿಗಿಯುವುದು, ಮಧ್ಯಪಾನ ಸೇವನೆಯಂತಹ ದುಷ್ಚಟಗಳಿಗೆ ದಾಸರಾಗುತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಪುರಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಯುವಕರು ದುಷ್ಚಟಗಳಿಂದ ದೂರವಿರುವುದರಿಂದ ಪಾರ್ಶ್ವವಾಯು ರೋಗದಿಂದ ದೂರವಿರಲು ಸಾಧ್ಯ ಎಂದೂ ಅವರು ಬಲವಾಗಿ ಪ್ರತಿಪಾದಿಸಿರು.
ಪಾರ್ಶ್ವವಾಯು ರೋಗ ತಗಲುವ ಪೂರ್ವದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ, ತಲೆಸುತ್ತು ಬರುವುದು, ದೇಹದಲ್ಲಿ ಆಯಾಸ ಕಂಡುಬರುವುದು, ದೃಷ್ಟಿಯಲ್ಲೂ ಸಮಸ್ಯೆ ಕಂಡು ಬರುವುದು. ಕೈ-ಕಾಲುಗಳಲ್ಲಿ ಶಕ್ತಿ ಕಡಿಮೆಯಾಗುವುದು ಕಂಡು ಬರುತ್ತದೆ. ರೋಗಿಯಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿದ್ದಲ್ಲಿ ಈ ಆಗುವ ಹೆಚ್ಚಿನ ಅನಾಹುತವನ್ನು ತಪ್ಪಿಸಲು ಸಾಧ್ಯ ಎಂದು ಡಾ.ಕ್ರಾಂತಿಕಿರಣ ಹೇಳಿದರು.
ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿರುವವರಿಗೂ ಪಾರ್ಶ್ವವಾಯು ರೋಗ ತಗಲುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಆದ್ದರಿಂದ ಪಾರ್ಶ್ವವಾಯುನಿಂದ ಯಾವುದೇ ವ್ಯಕ್ತಿ ನರಳುತ್ತಿರುವುದು ಕಂಡು ಬಂದಲ್ಲಿ ತಕ್ಷಣ ವ್ಯದ್ಯರನ್ನು ಸಂಪರ್ಕಿಸುವುದರಿಂದ ಹೆಚ್ಚಿನ ಅನಾಹುತುಗಳನ್ನು ತಪ್ಪಿಸಲು ಸಾಧ್ಯ. ಪಾರ್ಶುವಾಯು ತಗುಲಿದ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ನೀಡುವುದರಿಂದ ಅಂತಹ ವ್ಯಕ್ತಿ ಶಾಶ್ವತ ಅಂಗವೈಕಲ್ಯತೆಯಿಂದ ತಪ್ಪಿಸಲು ಸಾಧ್ಯವಾಗುವುದಲ್ಲದೆ, ಕೆಲ ಸಂದರ್ಭಗಳಲ್ಲಂತೂ ಪಾರ್ಶ್ವವಾಯುಗೆ ತುತ್ತಾದ ವ್ಯಕ್ತಿ ಕೋಮಾ ಹಂತಕ್ಕೆ ತಲುಪಿ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಅನೇಕ ಪ್ರಕರಣಗಳು ಇವೆ ಎಂದರು.
ನಿತ್ಯದ ಜೀವನದಲ್ಲಿ ಉತ್ತಮ ಜೀವನ ಪದ್ಧತಿ ರೂಢಿಸಿಕೊಂಡಲ್ಲಿ ಪಾರ್ಶ್ವವಾಯುವಿನಿಂದ ಮುಕ್ತಿ ಹೊಂದಲು ಸಾಧ್ಯ. ದೇಹದಲ್ಲಿ ಕೋಲ್ಯಾಸ್ಟ್ರಲ್ ಹೆಚ್ಚದಂತೆ ನಿತ್ಯವೂ ವಾಯಾಮ ಮಾಡುವುದು ತುಂಬಾ ಅವಶ್ಯಕ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು. ಆಹಾರ ಪದ್ಧತಿಯಲ್ಲಿ ಸಾಕಷ್ಟು ಕೊಬ್ಬಿನಾಂಶ ಇರದಂತೆ ನೋಡಿಕೊಳ್ಳುವುದು ಉತ್ತಮ. ತಂಬಾಕು ಸೇವನೆಯಿಂದ ಕಡ್ಡಾಯವಾಗಿ ದೂರವಿರಬೇಕು. ಮಧ್ಯಪಾನ ಸೇವನೆಯಿಂದಲೂ ಪಾರ್ಶ್ವವಾಯುವಿಗೆ ಆಹ್ವಾನ ನೀಡುವಂತಹ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಮಕೃಷ್ಣ ಆಶ್ರಮದ ಶ್ರೀ ರಘುವೀರಾನಂದ ಸ್ವಾಮೀಜಿ, ಆಧ್ಯಾತ್ಮವನ್ನು ಜೀವನದಲ್ಲಿ ರೂಢಿಸಿಕೊಂಡಲ್ಲಿ ಪಾರ್ಶ್ವವಾಯುವಂತಹ ಮಾರಣಾಂತಿಕ ಕಾಯಿಲೆಗಳಿಂದ ಪಾರಾಗಲು ಸಾಧ್ಯ. ಆಧ್ಯಾತ್ಮದಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆಯಲ್ಲದೆ, ಇಂದ್ರೀಯ ನಿಗ್ರಹಕ್ಕೂ ಸಾಕಷ್ಟು ಅನುಕೂಲವಾಗುತ್ತದೆ. ಒತ್ತಡ ಭರಿತ ಇಂದಿನ ಜೀವನ ಶೈಲಿಯಿಂದಾಗಿ ಯುವ ಜನಾಂಗ ದುಷ್ಚಟಗಳ ದಾಸರಾಗುತ್ತಿರುವುದರಿಂದ ಪಾರ್ಶ್ವವಾಯು ಸೇರಿದಂತೆ ಅನೇಕ ರೀತಿಯ ಕಾಯಿಲೆಗಳಿಗೆ ಯುವ ಸಮುದಾಯ ಬಲಿಯಾಗುತ್ತಿದೆ. ಡಾ.ಕ್ರಾಂತಿಕಿರಣ ಅವರು ಹೇಳಿದ ಜೀವನ ಶೈಲಿಯೊಟ್ಟಿಗೆ ಆಧ್ಯಾತ್ಮ ಮೈಗೂಡಿಸಿಕೊಂಡಲ್ಲಿ ಉತ್ತಮ ಹಾಗೂ ಧೀರ್ಘ ಕಾಲಿನ ಬದುಕು ಸಾಗಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಗಳ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಹಿರಿಯ ನಾಗರಿಕ ವೇದಿಕೆಯ ಎಂ.ಕೆ. ನಾಯ್ಕರ್ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ.ಮೋಹಿತೆ ಸ್ವಾಗತಿಸಿದರು. ಆಸ್ಲೆ ವಂದಿಸಿದರು.